Sunday, August 25, 2013

67th Independence day

Everywhere there are congratulatory messages, celebrations, elevated moods for 67th Independence day of the Republic of India??

What are we today?

We claim today to be the world's biggest democracy, but only 40% of the population vote! Are we then a real democracy?

40 odd years after Garibi hatao, we still need the Food Security Act to feed our people with 150 gm of food grains/person/day, and the definition of a rich person is a person who can earn more than Rs. 26/day.

We need Aap ke paise aap ke haath (Direct Benefit Transfer) to get in full what is rightfully ours.

We still need to fight in courts about the necessity to sing Vande mataram, our national song, in schools!
We have forgotten the sacrifices made by the anonymous millions during the freedom fight but remember just 1 family n their dynastic rule.

Subhas Chandra Bose, Bhagat Singh, Chandrashekar Azad, Khudiram Bose are described as terrorists in our text books, but Kasab n the people who wave flags of a neighbouring country are sympathised as freedom fighters!

Is there anything to celebrate, congratulate ourselves?

ವಸಂತ ಮೂಡುವುದೆಂದಿಗೆ

ಮೊದಲ ಬಾರಿ ಈ ಹಾಡು ಕೇಳಿದ್ದು ಸಿ. ಅಶ್ವಥ್ ಅವರ ಸಿರಿ ಕಂಠದಲ್ಲಿ. ಸಂಗೀತ, ಸಾಹಿತ್ಯ ಅಮೋಘವಾಗಿತ್ತು. ಆದರೆ ಇದರ ನಿಜವಾದ ಅರ್ಥ ತಿಳಿದದ್ದು ದೂರದ ದೆಹಲಿಯಲ್ಲಿ.

ಹೀಗೇ ಒಮ್ಮೆ supplier visit ಮುಗಿಸಿಕೊಂಡು ತಣ್ಣಗೆ AC ಗಾಡಿಯಲ್ಲಿ ಗುರ್‌ಗಾಂವದಿಂದ ದೆಹಲಿ ಏರ್‌ಪೋರ್ಟ್‌ಗೆ ಹೊರಟಿದ್ದೆ. ಹೊರಗೆ ವಿಪರೀತ ಬಿಸಿಲು, AC ಇದ್ದರೂ ಒಳಗೆ ಅಸಹನೆ. ನಮ್ಮ ಗಾಡಿ ಅಚಾನಕ್ ನಿಂತುಬಿಟ್ಟಿತು. ಮತ್ತೂ ಅಸಹನೆಗೊಂಡು ಕಿಟಕಿಯಿಂದ ಹೊರಗೆ ನೋಡಲು ಕಂಡದ್ದು ಒಂದು Ape ಆಟೋ. ಆಗಲೆ ಅದರಲ್ಲಿ ೩~೪ ಜನ ಇದ್ದರೂ ಸುಮಾರು ೧೦ highschool ಓದೋ ಹೆಣ್ಣುಮಕ್ಕಳು ಅದೇ ಆಟೋವನ್ನು ಏರಿ ಕುಳಿತರು. ಹೊರಗೆ ಉರಿಬಿಸಿಲು, ಈ ಪುಟ್ಟ ಮಕ್ಕಳು ಆಟೋದಲ್ಲಿ ಹೀಗೆ ಹೋಗುತ್ತಾರಲ್ಲ ಎಂಬ ಆಶ್ಚರ್ಯ, ದುಃಖ. ನೆನಪಾದದ್ದು ಇದೇ ಹಾಡು “ ವಸಂತ ಮೂಡುವುದೆಂದಿಗೆ, ಈ ಜನಕೋಟಿಯ ಗೋಳು ಬಾಳಿಗೆ”! ಯಾವುದರ ಪರಿವೂ ಇಲ್ಲದೆ ಆ ಮಕ್ಕಳು ನಗುನಗುತ್ತಾ, ಪರಸ್ಪರ ಮಾತಾಡುತ್ತಾ ತಮ್ಮ ಲೋಕದಲ್ಲೇ ಇದ್ದರು.

ಸುಮಾರು ಒಂದು ಘಂಟೆಯ ನಂತರ, ದೆಹಲಿ ಏರ್‌ಪೋರ್ಟ್ ತಲುಪಿಯಾಯ್ತು. Check in, security check ಎಲ್ಲಾ ಸಾಂಗವಾಗಿ ಮುಗಿಸಿ, waiting hallಗೆ ಬಂದ ಮೇಲೆ ಆಹಾ, ಸಮಾಧಾನದ ಉಸಿರು ಬಿಟ್ಟಂತಾಯಿತು. ಎಂಥಾ ಬದಲಾವಣೆ, ಅದೂ ಕೇವಲ ೪೦ kmಗಳಲ್ಲಿ! ಬೇಸಿಗೆಯಲ್ಲೂ ಛಳಿಯೆನಿಸುವಷ್ಟು AC, Pizza Hut, KFC, Costa Coffee…. ಪ್ರತಿಷ್ಟಿತ restaurantಗಳು. ಇನ್ನು ಕೊಳ್ಳುಬಾಕತನವನ್ನು ಪ್ರೋತ್ಸಾಹಿಸುವ ಮಿನಿ ಮಳಿಗೆಗಳು.... ಕೊನೆಯಿಲ್ಲ.

ಆದರೆ ಈ ಜನರೇಕೆ ಹೀಗೆ? ಕೆಲವರು ಮುಖ ಗಂಟು ಹಾಕಿಕೊಂಡು, ಮೊಬೈಲ್‌ನಲ್ಲಿ ಸಂಭಾಷಣೆ ನಡೆಸುತಿದ್ದಾರೆ, ಇನ್ನೂ ಕೆಲವರು blackberryಗಳಲ್ಲಿ ತಲ್ಲೀನರು, ಮತ್ತೂ ಕೆಲವರು laptopಗಳನ್ನು ಹೊತ್ತುಕೊಂಡು charging pointಗಾಗಿ ಹುಡುಕಾಟ, ಒಬ್ಬರ ಮುಖದಲ್ಲೂ ಮಂದಹಾಸದ ಛಾಯೆ ಕೂಡಾ ಇಲ್ಲ! ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವ ಮನಸ್ಸು! ನೆನಪಾದದ್ದು ಅದೇ ಹಾಡು “ ವಸಂತ ಮೂಡುವುದೆಂದಿಗೆ, ಈ ಜನಕೋಟಿಯ ಗೋಳು ಬಾಳಿಗೆ” ಈ ಜನರ ಬಾಳಲ್ಲೂ ವಸಂತ ಮೂಡುವುದೇ???